ಶೃಂಗಾರವೂ ವಿನೋದವೂ
ಅಶ್ಲೀಲ ಶೃಂಗಾರವಲ್ಲ! ಶೃಂಗಾರವು ಅಶ್ಲೀಲವಲ್ಲ!
Tuesday, 17 July 2012
೧೫
ಇಲ್ಲೊಬ್ಬ ಉತ್ತಮ ಸೈನಿಕನು ಇಹನಾತ
ಬಿಲ್ಲು ಹಿಡಿದರೆ ಯೋಗ್ಯ ಎಂತ ಶಸ್ತ್ರ!
ಮಲ್ಲಿಗೆಯ ಮಂಚದಲು ಅವನೊಬ್ಬ ಸೈನಿಕನೇ
ನಿಲ್ಲಲಾರದು ಸಖಿಯ ನಡುವೊಳ್ ವಸ್ತ್ರ!
೧೪
ಬಂದಿಹರು ಸ್ವಾಮಿಗಳು ದೊಡ್ಡಪುರುಷರ ಹಾಗೆ
ಇಂದು ಹಗಲೇ ಇತ್ತು ಪೂರ್ಣಕುಂಭ
ಚಂದನೆಯ ಇರುಳಿನಲಿ, ಮುಂದಿನಾಟವುಬೇಕೆ?
ಸುಂದರಿಯ ಬೆವರಿಳಿದ ಎರಡುಕುಂಭ!
೧೩
ಕಷ್ಟದಲಿ ಕೂಡಿದರು, ಮುತ್ತು ನೀಡುವುದಕೆ
ಇಷ್ಟವಿಲ್ಲೆಂದವಳು ನುಡಿದುದೇಕೆ?
ಪಟ್ಟದಾನೆಯ ಕೊಟ್ಟು, ಮತ್ತೇನು ಕೊಟ್ಟರೂ
ಇಪ್ಪ ಅಂಕುಶಕಿಷ್ಟು ಮುನಿಸುಬೇಕೆ?
೧೨
ಮಗುವು ಹುಟ್ಟುವುದೇಕೆ ಎಂದವನ ಕೇಳಿದಳು
ಮುಗುದೆಯಂತೆಯೆ ನಗುತ ಸಂಜೆಯಲ್ಲಿ
ಬಿಗಿದ ಬಂಧನದೊಳಗೆ,ಮತ್ತೆ ಮಾಸಗಳುರುಳೆ
ನಗುವಿತ್ತು ಮಗುವಿನದು, ಅವಳ ಮಡಿಲಿನಲ್ಲಿ!
೧೧
ಮುತ್ತನೊತ್ತುವೆ ಬಾರೆ ಹತ್ತಿರಕೆ ಎಂದಾಗ
ಸುತ್ತುವರಿಯುತ ಅವಳು ನಿಂದಳಲ್ಲ
ಹತ್ತು ಮುತ್ತನಿಟ್ಟು ಮತ್ತೇನೋ ಒತ್ತಿದರೆ
ಮತ್ತೆ ತಿಂಗಳ ರಜೆಯು ಇರಲೆ ಇಲ್ಲ !
Wednesday, 11 July 2012
೧೦
ಭಾಗವತ ಶ್ರೇಷ್ಟರು ಆ ರಾತ್ರಿ ಹಾಡಿದರು
ರಾಗಗಳ ಮೇಳೈಸಿ ಹಿಡಿದು ಶೃತಿಯ !
ಆಗಳೇ ಮನೆಯಾಕೆ, ಪ್ರಿಯಕರನ ಕೂಡಿದಳು
ಭೋಗದಲೆ ಮೆರೆದಿತ್ತು ಪೂರ್ಣರತಿಯ!
೯
ರವಿಯು ಕಾಣದ್ದನ್ನು ಕವಿಯು ಕಾಣುವನೆಂಬ
ಅವರ ಮಾತುಗಳನ್ನ ಕೇಳಿ ರವಿಯು
ಕವಿಯ ಹೆಂಡತಿಯನ್ನೆ ಕೇಳಿದನು ಮೊದಲಾಗಿ
ರವಿಕೆಯೊಳಗಿಪ್ಪುದೇನು ಎಂದು ?
೮
ಇವನೆಂತ ಗಂಡಸೋ ಎಂಬ ಮಾತನು ಕೇಳಿ
ಸಣಕಲನಿಗೇರಿತು ಸಿಟ್ಟೆ!
ಆ ಸಂಜೆ ಕಾರ್ಯಕೆ, ಹದಿಮೂರರ ತರುಣಿಯು
ತಿಂಗಳುಗಳೇರೆ ಕಾಣ್ ಹೊಟ್ಟೆ!
೭
ಯಕ್ಷಗಾನದಿ ಕೇಳ್ದ ಸರಸ ಲಾವಣ್ಯಕ್ಕೆ
ಮನಸೋತ ತರುಣಿಯಂದು
ಬೆಳಕೇರೆ ನೋಡಿದಳು, ತನ್ನ ಬಳಿಯಿದ್ದ
ಗಂಡಸವ ಕಪ್ಪು ಎಂದು!
೬
ಹುಡುಗರಿಗಿಷ್ಟ ಹೆಣ್ಣಿನ
ತುಟಿ ಕಟಿ ಎದೆ!
ಹುಡಿಗಿಯರಿಗೋ ಬೇಕು
ಹುಡುಗರ "ಅದೇ"
೫
ನೀರಿನ ನಲ್ಲಿಯ ಬಳಿ ಮೂರು
ನೀರೆಯರು ನಿಂದಿರೆ ರಸಿಕ
"ಈಗ ಬತ್ತಿದೆ, ರಾತ್ರಿ ಬನ್ನಿರಿ"
ಎಂದವರ ನೋಡಿ ತಾ ನಕ್ಕ!
೪
ಅತಿವಿನಯದೊಳು ಆದಿನದಿ ಆತನನು ಕರೆದು
ಸತಿ, ಜೊತೆಗೂಡಿ ಎಂದು ಕೇಳಲಿಕೆ
ಪತಿಯು ನಿರಾಕರಿಸೆ, ಮತ್ತೆ ಮರುದಿನದೊಳ್
ಜತೆಗೆ ಗಳಿಸಿದಳು ಧನದ ಕುಡಿಕೆ
೩
ಮೂರು ತಿಂಗಳಿನೊಳಗೆ ಮತ್ತೆ ಸೇರುವೆನೆಂದು
ಭಾರಿ ಭಾಷೆಯ ಕೊಟ್ಟು ಹೋದ ಪ್ರೇಮಿ
ನೀರೆಯೋ ಬಲುಜಾಣೆ ಎರಡು ತಿಂಗಳು ಉಂಡು!
ಸೇರಿದಳು ಉಪವಾಸವಿದ್ದೆನೆಂದು.
೨
ಭಟ್ತರಂಗಡಿ ಹುಡುಗ ಬಾಳೆಹಣ್ಣುನು ಕೊಡಲು
ಶೆಟ್ತರಾ ಮಗಳವಳ ಮುಖ ಕೆಂಪಗಾಗಿ !
ಬಿಟ್ಟನವ ಸಂಜೆಯಲಿ ಮನೆವರೆಗೆ ಅವಳನ್ನು
ಕೊಟ್ಟ ಮಕ್ಕಳನೆರಡು, ಎಂತ ತ್ಯಾಗಿ!
೧
ಬರಿಯ ಹರಕೆಗೆ ಹುಟ್ಟುವುದೆ ಹೊಸಜೀವ
ಪೊರೆಯ ಕಳಚದೆ ಸುಖವೆ ಮತ್ತೇನು ಕತೆಯೋ
ಹಿರಿದು ಹಿಗ್ಗಿದಾಗೆಲ್ಲ ಊಟ ದೊರಕುತ್ತಿರಲಿ
ಮರೆಯದಂತೆಯೆ ಇರಲಿ- ಎಂದ ಕಿರಣ
Newer Posts
Home
Subscribe to:
Posts (Atom)