Tuesday, 1 October 2013

ಗಾನ ಬಜಾನಾ..

ಮದುವೆಯಾದನವ ಮುದುಕನಾದ ಮೇಲ್
ಕುದುರೆಯಂತಿದ್ದ ಚೆಲು ತರುಣಿಯ 
ಮೊದಲನೆ ವಾರದೊಳು ಕೈಕೊಟ್ಟು ತಣಿಸಿದನು 
ಹದಿಬದೆಯೆನಿಸಿದಳು ಕೇಳಿ ಕಥೆಯ ..

ಅದೆ ಮನೆಯಲೊಬ್ಬ ಅಡುಗೆಯಾತನು ಇದ್ದ 
ಚದುರೆಯೊಳು ಅನುರಕ್ತನಾಗಿ
ಹೆದರಿಕೆಯೆ ಇಲ್ಲದೆಲೆ ನೋಟಕ್ಕೆ ದೊರೆತವು !
ಮೆದುವಾದುದೇನ್ ದೇಹ ಕರಗಿ !

ಮುಂದಿನ ದಿನಗಳೊಳು ಚಂದದಾ ಲಲನೆಯನು 
ಹಿಂದು ಮುಂದಿನಲೆ ಕಂಡ 
ನಿಂದಿತದು ಹೊಟ್ಟೆಯೊಳು , ಎಲ್ಲರೆಂದರು ಕೊನೆಗೆ 
ಮುದುಕನದ್ದಿರಬೇಕು ಪಿಂಡ !!